ಗೌಸಿಯಾ ಮೊಹಲ್ಲಾ ಶಿರೂರಿನಲ್ಲಿ ಲಾಕ್ಡೌನ್ ಪ್ರಯುಕ್ತ ಕಿಟ್ಸ್ ವಿತರಣೆ

0
1037

ವರದಿಗಾರ : ಖೋಕಾ ಅಬು ಅಹ್ಮದ್, ಶಿರೂರು

 ದಿವಂಗತ ಸೈಯದ್ ಅಬ್ದುಲ್ ಕಾದಿರ್ ಬಾಶು , ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು, ಗೌಸಿಯಾ ಯೂತ್ ಅಸೋಸಿಯೇಷನ್ (GYA) ಗೌಸಿಯಾ ಮೊಹಲ್ಲಾ ಶಿರೂರು, ಇವರ ವತಿಯಿಂದ ಕಳಿಹಿತ್ಲು ವಿನಲ್ಲಿ ಮೂರು ಹಂತದಲ್ಲಿ ಅರ್ಹ ಕುಟುಂಬಕ್ಕೆ ಆಹಾರ ಸಾಮಗ್ರಿಯನ್ನು ಜಮಾತಿನ ಮುಂದಾಳುತ್ವದಲ್ಲಿ ವಿತರಿಸಲಾಯಿತು. ಮೊದಲ ಹಂತದಲ್ಲಿ ತೀರಾ ಬಡವರಿಗೆ ಹಾಗೂ ನಿರ್ಗತಿಕರಿಗೆ,

ಎರಡನೆ ಹಂತದಲ್ಲಿ ಲಾಕ್ ಡೌನ್ ನಿಂದ ಸಂಕಷ್ಟ ದಲ್ಲಿರುವ ಮೀನುಗಾರರಿಗೆ ಹಾಗೂ ಮೂರನೇ

ಹಂತದಲ್ಲಿ ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡಿರುವವರಿಗೆ ಸೇರಿ ಒಟ್ಟು 73 ಕಿಟ್ ಗಳನ್ನು ಹಸ್ತಾಂತರಿಸಲಾಯಿತು.

ವಿವರವಾದ ವರದಿ:

‌1. ದಿ! ಸೈಯದ್ ಅಬ್ದುಲ್ ಕಾದಿರ್ (ಬಾಶು ಭಾಯ್) ರವರು ಜೀವಂತ ಇರುವಾಗಲೇ ತನ್ನ ಸಂಪಾದನೆಯಿಂದ ಬಡವರಿಗೆ ಹಾಗೂ ನಿರ್ಗತಿಕರಿಗೆ ಅನೇಕ ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ. ಅದರಂತೆಯೇ ಅವರ ನಿಧನದ ಬಳಿಕವೂ ಅವರ ಸತ್ಕಾರ್ಯವನ್ನು ಅವರ ಕುಟುಂಬಸ್ಥರು ಮುಂದುವರಿಸಿದ್ದು , ಇದರಿಂದ ಅನೇಕ ಬಡ ಕುಟುಂಬಕ್ಕೆ ಆಸರೆ ಯಾಗಿದೆ. ಬರಗಾಲದ ಸಮಯದಲ್ಲಿ ಕುಡಿಯುವ ನೀರು ಸರಬರಾಜು , ಬಡ ಕುಟುಂಬಗಳಿಗೆ ರಂಝಾನ್ ತಿಂಗಳಲ್ಲಿ ಪ್ರತಿ ಜಮಾತಿನ ಮುಖಾಂತರ ಆಹಾರ ಸಾಮಾಗ್ರಿ ವಿತರಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಬಾಶು ಭಾಯ್ ಪರವಾಗಿ ಮಾಡುತ್ತಿದ್ದಾರೆ. ಅಲ್ಲಾಹನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಸತ್ಕಾರ್ಯವನ್ನು ಮೆಚ್ಚಿ ಅವರಿಗೆ ಸ್ವರ್ಗದಲ್ಲಿ ಅತ್ಯುತ್ತಮ ಜಾಗ ದಯಪಾಲಿಸಲಿ , ಆಮೀನ್.

‌2. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು: ಈ ಒಕ್ಕೂಟವು ಉಡುಪಿ ಜಿಲ್ಲೆಯಲ್ಲಿ ಬರುವ ಎಲ್ಲ ಜಮಾತಿನ ಎಳಿಗೆಗೆ ಶ್ರಮಿಸುವುದಲ್ಲದೆ ಅವರ ರಕ್ಷಣೆಗೆ ಅನೇಕ ವರ್ಷದಿಂದ ಶ್ರಮಿಸುತ್ತಿದೆ. ಈ ಸಂಸ್ಥೆಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಮಾಜದಲ್ಲಿ ಇರುವ ತೀರಾ ನಿರ್ಗತಿಕರಿಗೆ ಜಾತಿ ಧರ್ಮದ ಭೇದ ಭಾವ ಇಲ್ಲದೆ ಅವರ ಬಳಿ ತೆರಳಿ ಅವರ ಕಷ್ಟಗಳನ್ನು ಅರಿತು ಸಹಾಯ ಮಾಡುವ ಒಂದು ಪುಣ್ಯ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ಇದರಿಂದ ಸಮಾಜದಲ್ಲಿ ಶಾಂತಿ , ಸಹೋದರತೆಯಿಂದ ಹಾಗೂ ಪರಸ್ಪರರನ್ನು ಅರಿತು ಬಾಳುವ ಭದ್ರ ಬುನಾದಿ ಹಾಕಿಕೊಂಡಿದೆ . ಅಲ್ಲಾಹನು ಈ ಒಕ್ಕುಟ್ಟಕ್ಕೂ ತನ್ನ ಧ್ಯೇಯೆಯನ್ನು ಸಾಕಾರಗೊಳಿಸುವ ಶಕ್ತಿ ತುಂಬಲಿ. ಆಮೀನ್

‌3. ಗೌಸಿಯಾ ಯೂತ್ ಅಸೋಸಿಯೇಷನ್ , ಗೌಸಿಯಾ ಮೊಹಲ್ಲಾ, ಶಿರೂರು ಎಂಬುದು ಒಂದು ಯುವಕರ ಸಂಘವಾಗಿದ್ದು, ಹಿಂದಿನ 38 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಕ್ರೀಡಾ ಹಾಗೂ ವಿಧ್ಯಾಭ್ಯಾಸ ದಂತಹ ಅನೇಕ ಪವಿತ್ರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಊರವರ ಪ್ರಶಂಸೆಗೆ ಪಾತ್ರವಾಗಿದೆ. ಇಂದಿಗೂ ಈ ಸಂಘವು ಬಡವರ , ನಿರ್ಗತಿಕರ ವಿಧ್ಯಾರ್ಥಿಗಳ ಪರವಾಗಿ ಸತತ ಪರಿಶ್ರಮ ಮಾಡುತ್ತಿದ್ದು , ಇವರಿಗೆ ಯಾವುದೇ ಕಷ್ಟ ಬರದಂತೆ ನೋಡಿಕೊಂಡಿರುತ್ತದೆ. ಬರಗಾಲದ ಸಮಯದಲ್ಲಿ ನೀರು ಸರಬರಾಜು ಮಾಡುವ ಪುಣ್ಯ ಕೆಲಸವನ್ನು ಸಹ ಮಾಡುತ್ತಿದೆ. ಇಷ್ಟು ವರ್ಷದಲ್ಲಿ ಈ ಸಂಘವು ಅನೇಕ ಹಂತದಲ್ಲಿ ಆಸ್ಪತ್ರೆ ವೆಚ್ಚಕ್ಕಾಗಿ ಹಣದ ರೂಪದಲ್ಲಿ ಸಹಾಯವನ್ನೂ ಸಹ ಮಾಡಿರುತ್ತದೆ ಹಾಗೂ ಸ್ಥಳೀಯ ಸರಕಾರಿ ಶಾಲೆಯ ಸಮಾರಂಭ ಹಾಗೂ ಆಟೋಟ ಕಾರ್ಯಕ್ರಮಕ್ಕೆ ತನ್ನಿಂದ ವೆಚ್ಚ ಭರಿಸುತ್ತಿದೆ. ಅಲ್ಲಾಹನು ಈ ಸಂಘಕ್ಕೆ ಇನ್ನೂ ಹೆಚ್ಚಿನ ಜನರ ಸೇವೆ ಮಾಡುವ ಶಕ್ತಿ ಹಾಗೂ ಸಾಮರ್ಥ್ಯ ದಯಪಾಲಿಸಲಿ. ಆಮೀನ್.

 ಈ ಪುಣ್ಯ ಕೆಲಸಕ್ಕೆ ಸಹಾಯ ಮಾಡಿದ ದಾನಿಗಳಿಗೆ ಊರಿನ ಎಲ್ಲಾ ನಾಗರಿಕರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು .

 ಈ ಪವಿತ್ರ ಸಂಧರ್ಭದಲ್ಲಿ ಜಮಾತಿನ ಅಧ್ಯಕ್ಷರಾದ ತಬ್ಕೆ ಫಾರೂಕ್, ಜಮಾತಿನ ಉಪಾಧ್ಯಕ್ಷ ಹೊಂಗೆ ಹುಸೈನ್, ಜಮಾತಿನ ಕಾರ್ಯದರ್ಶಿ ಖೋಕಾ ಅಬು ಅಹ್ಮದ್, ಜಮಾತಿನ ಉಪ ಕಾರ್ಯದರ್ಶಿ ನೇಜಿ ಅಬ್ದುಲ್ ಅಝೀಝ್, ಪಂಚಾಯತ್ ಸದಸ್ಯರಾದ ತಾರಿಸಲ್ಲ ಮೊಹಮ್ಮದ್ ಗೌಸ್ ಹಾಗೂ ಹೊಂಗೆ ಅಮೀನ್, ಮಾಮ್ದು ಜಿಫ್ರೀ, ಖೋಕಾ ಮುನೀರ್, ನೇಜಿ ಜಿಫ್ರಿ, ನೇಜಿ ನೂರುಲ್ ಅಮೀನ್ , ಖೋಕಾ ಬಾವಾ ಅಮೀರ್, ತಬ್ಕೆ ಸಮೀರ್, ಮಾಮ್ದು ತವ್ವಾಬ್ ಹಾಗೂ ಗೌಸಿಯಾ ಯೂತ್ ಅಸೋಸಿಯೇಷನ್ ಸದಸ್ಯರು ಹಾಜರಿದ್ದರು.

(ವಿ.ಸೂ: ಜನರ ಮಾನ / ಗೌರವ/ ಮರ್ಯಾದೆಯನ್ನು ಕಾಪಾಡುವ ಸಲುವಾಗಿ ಯಾವುದೇ ವ್ಯಕ್ತಿಯ ಫೋಟೋವನ್ನು ವರದಿಯ ಜೊತೆಯಲ್ಲಿ ಹಾಕಲಾಗಿಲ್ಲ.)

اظہارخیال کریں

Please enter your comment!
Please enter your name here